== ಆಣೆಕಟ್ಟು == ಕಬಿನಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿ ಮತ್ತು ಬಿದರಹಳ್ಳಿ ಗ್ರಾಮಗಳ ಬಳಿ ಕಬಿನಿ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಕೆಳಮುಖ ಭಾಗವಾಗಿ ಕಬಿನಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ. == ನಿರ್ಮಾಣ == ಕಬಿನಿ ಅಣೆಕಟ್ಟನ್ನು ೧೯೭೪ ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಬಳಿ ಕಟ್ಟಲು ಕಾರ್ಯ ಆರಂಭವಾಯಿತು. == ಉಪಯೋಗ == ಕಬಿನಿ ಅಣೆಕಟ್ಟನ್ನು ಸಾಗರೆದೊಡ್ಡಕೆರೆ (ಹುಲ್ಲುಮಲೆ ಗ್ರಾಮ) ಮತ್ತು ನುಗು (ಸಂಬೇಗೌಡನಹಳ್ಳಿ ಗ್ರಾಮ) ಎಂಬ ಎರಡು ಭಾಗವಾಗಿ ವಿಂಗಡಿಸಲಾಗಿದೆ. == ವಿಸ್ತೀರ್ಣ == ಉದ್ದ: ೩೯೪೦ ಮೀಟರ್ (೧೨೯೨೭ ಅಡಿ) ಎತ್ತರ: ೨೦.೧೧೬೮ ಮೀಟರ್ (೧೬೬ ಅಡಿ) ಅಗಲ: ೬೯೬ ಮೇಟರ್ (೨೨೮೩.೪೬ ಅಡಿ) ಸಂಗ್ರಹ ಸಾಮರ್ಥ್ಯ: ೧೦೫.೬೩ ಕೋಟಿ ಸಿಎಂ೩ (೨೮ ಟಿ ಎಂಸಿ) ಗೇಟುಗಳು: ೪ ಅಚ್ಚುಕಟ್ಟು ಪ್ರದೇಶ: ೨೧೪೧.೯೦ ಚದರ ಕಿಮೀ. ಮುಳುಗಡೆ ಪ್ರದೇಶ: ೪೬ ಹಳ್ಳಿಗಳು == ಉದ್ದೇಶಗಳು == ಕಬಿನಿ ಆಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ನೀರುಬಳಕೆ - ಈ ಎರಡು ಉದ್ದೇಶಗಳಿಗೆ ಬಳಸಲಾಗುತ್ತಿದೆ. == ಸ್ವಾರಸ್ಯ == ಮೈಸೂರು ಮಹಾರಾಜರ ಆಡಳಿತದಲ್ಲಿ ಕಬಿನಿ ವನ್ಯಮೃಗಗಳ ಬೇಟೆಗೆ ಹೆಸರುವಾಸಿಯಾಗಿತ್ತು. ಕಬಿನಿ ಜಲಾಶಯದ ಬಳಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮಂಚೇಗೌಡನಹಳ್ಳಿ, ಕುಪ್ಪೆ ಬೆಟ್ಟ ಇವೇ ಮುಂತಾದ ವನ್ಯಮೃಗಗಳ ತಾಣಗಳಿವೆ. == ಉಲ್ಲೇಖಗಳು ==